ಮಗನ ಶವದ ಪಕ್ಕ ತಾಯಿ ನೇಣಿಗೆ ಶರಣು

ಮಗನ ಶವದ ಪಕ್ಕ ತಾಯಿ ನೇಣಿಗೆ ಶರಣು

ಬಾಗಲಕೋಟೆ,ಜು.26: ಮೂರು ವರ್ಷದ ಮಗನ ಶವದ ಪಕ್ಕ ತಾಯಿ ನೇಣಿಗೆ ಶರಣಾಗಿರುವ ಘಟನೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ನಡೆದಿದೆ.

೨೫ ವರ್ಷದ  ದೀಪಾ ಮೇಟಿ ಎಂಬುವರೇ ನೇಣಿಗೆ ಶರಣಾದ ಮಹಿಳೆಯಾಗಿದ್ದಾಳೆ.ಮಹಿಳೆಯ  ೩ ವರ್ಷದ ಶೌರ್ಯ ಅನ್ನೊ ಮಗು   ಹಾಸಿಗೆ ಮೇಲೆ ಮಲಗಿರುವ ಸ್ಥಿತಿಯಲ್ಲಿ ಸಾವನ್ನಪ್ಪಿದೆ.

ಬಾಗಲಕೋಟೆಯ ವಿದ್ಯಾಗಿರಿಯ ೧೬ ನೇ ಕ್ರಾಸ್ ನಲ್ಲಿ ಈ ದುರ್ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.  ಸದ್ಯ ಸ್ಥಳಕ್ಕೆ ಬಾಗಲಕೋಟೆ  ಎಸ್ ಪಿ- ಸಿಬಿ  ರಿಷ್ಯಂತ್ ಭೇಟಿ ನೀಡಿ 
ಪರಿಶೀಲನೆ ನಡೆಸಿದ್ರು.

ಮೇಲ್ನೋಟಕ್ಕೆ ಆತ್ಮಹತ್ಯೆ ರೀತಿ ಇದೆ ಎಂದ ಎಸ್ ಪಿ, ಮಗುವನ್ನು ನೀರಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಶಂಕ್ಯೆ ಇದೆ ‌ಶವ ಪರೀಕ್ಷೆಯ ನಂತ್ರವಷ್ಟೆ ಸಾವಿನ ಸತ್ಯಾ ಸತ್ಯತೆ 
ತಿಳಿಯಲಿದೆ ಎಂದು  ತಿಳಿಸಿದ್ರು.ಘಟನೆ ಬಗ್ಗೆ ನವನಗರ ಠಾಣೆ ಪೊಲೀಸರು ಸ್ಥಳದಲ್ಲಿದ್ದು ಕುಟುಂಬಸ್ಥರ ವಿಚಾರಣೆ ನಡೆಸಿದ್ದಾರೆ.