ವಿವಸ್ತ್ರಗೊಳಿಸಿ ಅಪಮಾನ - ನಾಗರಿಕ ಸಮಾಜಕ್ಕೆ ಕಳಂಕ

ವಿವಸ್ತ್ರಗೊಳಿಸಿ ಅಪಮಾನ - ನಾಗರಿಕ ಸಮಾಜಕ್ಕೆ ಕಳಂಕ

ವಿಜಯಪುರ ,ಜು.5: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ಇಂಡಿ ತಾಲೂಕಿನ ಹಿರೆಮಸಳಿ ಗ್ರಾಮದ ಸಂತ್ರಸ್ಥೆ ಸಾವಿತ್ರಿ ದುಂಡಯ್ಯ ಹಿರೇಮಠ ಇವರನ್ನು ನಗರದ ಹಿರಿಯರು ಬೇಟಿ ಮಾಡಿ ಆತ್ಮಸ್ಥೈರ್ಯ ತುಂಬಿ ಘಟನೆಯನ್ನು ತೀರ್ವವಾಗಿ ಖಂಡಿಸಿದರು.

ಮಹಿಳೆಯ ಮೇಲೆ ದೌರ್ಜನ್ಯ ಮಾಡಿದ್ದು ಕಾನೂನು ಅಪರಾಧವಾಗಿದೆ. ಮಹಿಳೆಯ ಗೌರವವನ್ನು ಹಾಳು ಮಾಡಿದ್ದಲ್ಲದೆ ವಿವಸ್ತ್ರಗೊಳಿಸಿ ಅಪಮಾನ ಮಾಡಿ ಧೈಹಿಕ ಹಿಂಸೆ ನೀಡಿದ್ದು ಬಸವ ನಾಡಿಗೆ ಅಪಮಾನವಾಗಿದೆ. ಕಾನೂನು ಯಾರು ಕೈಗೆತ್ತಿಕೊಳ್ಳಬಾರದು ಅನ್ಯಾಯವಾಗಿದ್ದರೆ ನ್ಯಾಯಾಲಯ ಮತ್ತು ಪೋಲಿಸ್ ಸ್ಟೇಶನ್ ನ್ಯಾಯಕ್ಕಾಗಿಯೇ ಸ್ಥಾಪಿಸಲ್ಪಟ್ಟಿವೆ.

ನಾಗರಿಕ ಸಮಾಜದಲ್ಲಿ ಇಂತಹ ಕೃತ್ಯಗಳಿಂದ ಕಳಂಕ ಬಂದಿದೆ. ಸೂಫಿ ಸಂತರ, ಶರಣರ ಜಿಲ್ಲೆಯಾದ ವಿಜಯಪುರದಲ್ಲಿ ಇಂತಹ ಘಟನೆ ಯಾರು ನಿರಕ್ಷಿಸರಲಿಲ್ಲ. 

    ಇತ್ತೀಚಿಗೆ ಸಿಂದಗಿ ತಾಲೂಕಿನ ಹಾಳ ಮುಂಡಕನಾಳ ಗ್ರಾಮದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಘಟನೆ ಜರುಗಿತ್ತು. ಜಿಲ್ಲೆಯಲ್ಲಿ ಇಂತಹ ಘಟನೆಗಳು ಜರಗುತ್ತಿರುವುದರಿಂದ ಸಾಮಾಜಿಕ ಸಾಮರಸ್ಯ ಹಾಳಾಗುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುವುದರಿಂದ ಸಹೋದರತೆಯ ಭಾವನೆಗೆ ಕಳಂಕ ಬರುತ್ತದೆ. 

    ಜಿಲ್ಲಾಡಳಿತ ಸಂತ್ರಸ್ಥ ಮಹಿಳೆ ಅತ್ಯಂತ ಕಡುಬಡವಳಾಗಿದ್ದು ಅವಳಿಗೆ ಆರ್ಥಿಕ ಸಹಾಯ ಮತ್ತು ವೈದ್ಯಕೀಯ ಸೌಲಭ್ಯ ಅಲ್ಲದೆ ಗೌರವದಿಂದ ಬಾಳಲು ಸಹಕಾರ ನೀಡಬೇಕು ಅಪರಾಧಿಗಳಿಗೆ ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಜೆ.ಡಿ.ಎಸ್. ಜಿಲ್ಲಾ ಕಾರ್ಯಾಧ್ಯಕ್ಷ ದಿಲಾವರ ಖಾಜಿ, ಧಾರ್ಮಿಕ ಮುಖಂಡರಾದ ಮಹಿಮೂದ ಖಾಜಿ, ಅಬ್ದುಲ್ವ.ಹಾಬ ಬೇಲಿಪ, ಈರಣ್ಣ ಮಾಮನೆ, ಎಮ್.ಎ. ಜಮಖಂಡಿ ಉಪಸ್ಥಿತರಿದ್ದು ಅವಳಿಗೆ ನ್ಯಾಯ ಕೊಡಿಸುವುದಾಗಿ ಬರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸಂತ್ರಸ್ಥೆ ಸಾವಿತ್ರಿ ಪತಿ ದುಂಡಯ್ಯ ಹಿರೇಮಠ ಉಪಸ್ಥಿತರಿದ್ದರು.